ಪುಣ್ಯಭೂಮಿ – ತಪೋಭೂಮಿ –ಕರ್ಮಭೂಮಿಯೆನಿಸಿದ ಭರತಭೂಮಿಯಲ್ಲಿ ಅದೆಷ್ಟೋ ಜ್ಞಾನಿಗಳು, ವಿಜ್ಞಾನಿಗಳು, ಅವಧೂತರು, ತಪಸ್ವಿಗಳು, ಸಾಧಕರು, ವಿದ್ವಾಂಸರು, ಪುಣ್ಯಾತ್ಮರು ಅವತರಿಸಿ ಜಗಕುಪಕರಿಸಿ ಬದುಕನ್ನು ಸಾರ್ಥಕವನ್ನಾಗಿಸಿದ್ದಾರೆ. ಇಂತಹ ಪರಂಪರೆಯಲ್ಲಿ ಅವತರಿಸಿದ ಸಾಧಕೋತ್ತಮ ವಿದ್ವಾಂಸರು ವಿದ್ವಾನ್ ಎನ್ ರಂಗನಾಥಶರ್ಮರು. ಸಹೃದಯತೆ-ಸದ್ಗುಣ-ಪಾಂಡಿತ್ಯಗಳ ಸಂಗಮಕ್ಕೊಂದು ಉತ್ತಮ ಉದಾಹರಣೆಯೆಂದರೆ ಶ್ರೀಯುತ ಶರ್ಮರು. ಭಾರತದೇಶದ ನೈಋತ್ಯ ಭಾಗದಲ್ಲಿ ದೇಶದ ಯಜಮಾನನೋ ಎಂಬಂತೆ ರಾರಾಜಿಸುತ್ತಿರುವ ರಾಜ್ಯವಾದ ಕರ್ನಾಟಕದಲ್ಲಿ ಮಲೆನಾಡಿನಿಂದಲೇ ಪ್ರಸಿದ್ಧಿಯನ್ನು ಹೊಂದಿದ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ನಡಹಳ್ಳಿಯು ಇವರ ಜನ್ಮಸ್ಥಳ. ಭಗವತ್ಪಾದಶಂಕರಾಚಾರ್ಯರು ಜಗಕವತರಿಸಿದ ಪರಮಪವಿತ್ರದಿನವಾದ ವೈಶಾಖಶುದ್ಧ ಪಂಚಮಿಯಂದು ಹಾಗೂ ಮರ್ಯಾದಾ ಪುರುಷೋತ್ತಮನಾದ ಶ್ರೀರಾಮಚಂದ್ರನು ಆವಿರ್ಭವಿಸಿದ ಪುಣ್ಯನಕ್ಷತ್ರವಾದ ಪುನರ್ವಸು ನಕ್ಷತ್ರದಲ್ಲಿ ಶ್ರೀಮತಿ ಜಾನಕಮ್ಮ ತಿಮ್ಮಪ್ಪ ದಂಪತಿಗಳ ಸುಪುತ್ರರಾಗಿ ೦೭-೦೪-೧೯೧೬(?)* ರಂದು ಜನಿಸಿದರು. ವಿಶ್ವಾಮಿತ್ರ ಗೋತ್ರದ ಬೋಧಾಯನ ಸೂತ್ರದ ಯಜುರ್ವೇದಿಗಳಾದ ಶ್ರೀಯುತರು ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನಮ್ – ಶ್ರೀಸಂಸ್ಥಾನ ಗೋಕರ್ಣ – ಶ್ರೀರಾಮಚಂದ್ರಾಪುರ ಮಠದ ಪಾರಂಪರಿಕ ಶಿಷ್ಯಪರಂಪರೆಗೆ ಸೇರಿದ ಸ್ಮಾರ್ತ ಬ್ರಾಹ್ಮಣ ಪಂಗಡಗಳಲ್ಲೊಂದಾದ ಹವ್ಯಕ ಪಂಗಡಕ್ಕೆ ಸೇರಿದವರು.
ಕೃಷಿಕ ಕುಟುಂಬದ ಹಿನ್ನೆಲೆಯಿಂದ ಬಂದ ಇವರ ಪ್ರಾಥಮಿಕ ವಿದ್ಯಾಭ್ಯಾಸವು ನಡಹಳ್ಳಿ ಮತ್ತು ಸೊರಬಗಳಲ್ಲಿ ನಡೆಯಿತು. ಮುಂದೆ ಅಗಡಿ ಆನಂದಾಶ್ರಮದಲ್ಲಿ ಸಂಸ್ಕೃತಾಧ್ಯಯನವನ್ನು ಆರಂಭಿಸಿದರೂ ಅನಾರೋಗ್ಯದ ಕಾರಣದಿಂದ ಅಲ್ಪಕಾಲದಲ್ಲೇ ಅಲ್ಲಿಂದ ಬಿಡಬೇಕಾಯಿತು. ಅನಂತರ ಕೆಳದಿಯ ರಾಮೇಶ್ವರ ದೇವಾಲಯದಲ್ಲಿ ನಡೆಯುತ್ತಿದ್ದ ಸಂಸ್ಕೃತ ಪಾಠಶಾಲೆಯಲ್ಲಿ ಸುಮಾರು ಮೂರು ವರ್ಷಗಳ ಕಾಲ ವೇದ ಮತ್ತು ಸಂಸ್ಕೃತಗಳ ಬಾಲಪಾಠಗಳನ್ನು ಮತ್ತೂರು ವೇ. ಬ್ರ. ಶ್ರೀ. ನಾರಾಯಣ ಶಾಸ್ತ್ರಿಗಳಲ್ಲಿ ಅಧ್ಯಯನ ಮಾಡಿದರು. ಪ್ರಥಮಕಾವ್ಯಗಳನ್ನು ಪೂರೈಸಿ ಸಾಹಿತ್ಯಾಧ್ಯಯನಕ್ಕಾಗಿ ಬೆಂಗಳೂರಿನ ಶ್ರೀ ಚಾಮರಾಜೇಂದ್ರ ಸಂಸ್ಕೃತ ಮಹಾಪಾಠಶಾಲೆಗೆ ಸೇರಿದರು. ಇಲ್ಲಿ ಸಾಹಿತ್ಯಾಧ್ಯಯನದ ನಂತರ ಸುಪ್ರಸಿದ್ಧ ವಿದ್ವಾಂಸರಾದ ವೇ.ಬ್ರ. ಶ್ರೀ. ನುಗ್ಗೇಹಳ್ಳಿ ತಿರುನಾರಾಯಣ ಅಯ್ಯಂಗಾರ್, ವಿದ್ವಾನ್ ತಿಮ್ಮಣ್ಣಾಚಾರ್ಯರು, ವಿದ್ವಾನ್ ಶ್ರೀಕಂಠಶಾಸ್ತ್ರಿ, ವಿದ್ವಾನ್ ಕೃಷ್ಣಶಾಸ್ತ್ರಿಗಳಲ್ಲಿ ವ್ಯಾಕರಣ ಶಾಸ್ತ್ರದ ಪ್ರೌಢಗ್ರಂಥಗಳನ್ನು ಅಧ್ಯಯನ ಮಾಡಿ ವ್ಯಾಕರಣ ವಿದ್ವನ್ಮಧ್ಯಮಾ, ವಿದ್ವದುತ್ತಮಾಗಳನ್ನು ವೈಶಿಷ್ಟ್ಯ ಶ್ರೇಣಿಗಳಲ್ಲಿ ತೇರ್ಗಡೆ ಹೊಂದಿ ವ್ಯಾಕರಣ ವಿದ್ವಾನ್ ಎಂಬ ಪದವಿಯನ್ನು ಹೊಂದಿದರು.
ಅನಂತರ ವೇ. ಬ್ರ. ಶ್ರೀ. ಲಕ್ಷ್ಮೀನಾರಾಯಣ ಶಾಸ್ತ್ರಿ ಹಾಗೂ ಪಂಡಿತ ಪ್ರವರ ಕೋಡೂರು ಕೃಷ್ಣಜೋಯಿಸರಲ್ಲಿ ಅಲಂಕಾರಶಾಸ್ತ್ರದ ಪ್ರೌಢಗ್ರಂಥಗಳನ್ನು ಅಧ್ಯಯನ ಮಾಡಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಅಲಂಕಾರ ವಿದ್ವಾನ್ ಎಂಬ ಪದವಿಯನ್ನು ಹೊಂದಿದರು. ಇಷ್ಟಲ್ಲದೆ ಈ ಈರ್ವರು ವಿದ್ವಾಂಸರಲ್ಲಿಯೇ ಅದ್ವೈತ ವೇದಾಂತ ಶಾಸ್ತ್ರವನ್ನು ಅಧ್ಯಯನ ಮಾಡಿ ವೇದಾಂತಶಾಸ್ತ್ರಪಾರಂಗತರೂ ಶ್ರೀವಿದ್ಯೋಪಾಸಕರೂ ಆದ ವೇ. ಬ್ರ. ಶ್ರೀ. ಕೆ. ಪಿ. ಶಂಕರಶಾಸ್ತ್ರಿಗಳಲ್ಲಿ ಅದ್ವೈತ ವೇದಾಂತದ ಪ್ರೌಢಗ್ರಂಥಗಳನ್ನು ಆಳವಾಗಿ ಅಭ್ಯಸಿಸಿ ವೇದಾಂತ ವಿದ್ವಾನ್ ಎನಿಸಿಕೊಂಡರು. ನಿರಂತರ ಅಧ್ಯಯನ ಶೀಲರಾದ ಇವರ ಜ್ಞಾನದಾಹ ಇಲ್ಲಿಗೇ ತೀರದೆ ಹಳೆಗನ್ನಡ –ನಡುಗನ್ನಡ-ಹೊಸಗನ್ನಡಗಳನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡಿ ಮದ್ರಾಸ್ ವಿಶ್ವವಿದ್ಯಾಲಯ ನಡೆಸುತ್ತಿದ್ದ ಕನ್ನಡ ವಿದ್ವಾನ್ ಪರೀಕ್ಷೆಗೆ ಕುಳಿತು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಕನ್ನಡ ವಿದ್ವಾನ್ ಎಂಬ ಪದವಿಯನ್ನೂ ತಮ್ಮದಾಗಿಸಿಕೊಂಡರು. ಕರ್ನಾಟಕ ಸರಕಾರ ನಡೆಸುತ್ತಿದ್ದ ಕನ್ನಡ ಪಂಡಿತ ಪರೀಕ್ಷೆಯಲ್ಲೂ ತೇರ್ಗಡೆ ಹೊಂದಿ ಕರ್ನಾಟಕ ಸರಕಾರ ನೀಡುವ ಕನ್ನಡ ಪಂಡಿತ ಎಂಬ ಬಿರುದಿಗೆ ಪಾತ್ರರಾದರು.
ಶ್ರೀಯುತ ಶರ್ಮರು ಶ್ರೀಚಾಮರಾಜೇಂದ್ರ ಸಂಸ್ಕೃತ ಕಾಲೇಜಿನ ವಿದ್ಯಾರ್ಥಿಸಂಘಕ್ಕೆ ನಾಲ್ಕು ವರ್ಷಗಳ ಕಾಲ ಕಾರ್ಯದರ್ಶಿಯಾಗಿದ್ದರು. ಅಲ್ಲದೆ ತಾವು ವಾಸವಾಗಿದ್ದ ವ್ಯಾಸಮಂದಿರ ವಿದ್ಯಾರ್ಥಿನಿಲಯದಲ್ಲಿ ವಿದ್ಯಾರ್ಥಿಗಳ ವ್ಯವಸ್ಥಾಪಕರಾಗಿಯೂ ಕಾರ್ಯನಿರ್ವಹಿಸಿದ್ದರು.
ಹಾಸನ ಜಿಲ್ಲೆಯ ಪ್ರೌಢಶಾಲೆಯೊಂದರಲ್ಲಿ ಸಂಸ್ಕೃತಾಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿದ ಶ್ರೀಯುತರು ಮುಂದೆ ಬೇಲೂರಿನ ಸಂಸ್ಕೃತಪಾಠಶಾಲೆಯಲ್ಲಿ ಸಂಸ್ಕೃತಾಧ್ಯಾಪಕರಾಗಿ ಸೇರಿದರು. ೧೯೪೮ರಲ್ಲಿ ಬೆಂಗಳೂರಿನ ಶ್ರೀಚಾಮರಾಜೇಂದ್ರ ಸಂಸ್ಕೃತಕಾಲೇಜಿನಲ್ಲಿ ವ್ಯಾಕರಣ ಶಾಸ್ತ್ರ ವಿಭಾಗದಲ್ಲಿ ಅಧ್ಯಾಪಕರಾಗಿ ನಿಯುಕ್ತರಾದರು. ಸುಮಾರು ೨೮ ವರ್ಷಗಳ ಕಾಲ ಅಧ್ಯಾಪನ ಮಾಡಿ ೧೯೭೬ರಲ್ಲಿ ನಿವೃತ್ತರಾದರು. ತನ್ನ ಬದುಕಿನುದ್ದಕ್ಕೂ ನೂರಾರು ಶಿಷ್ಯರಿಗೆ ಪಾಠಶಾಲೆಯ ಒಳಗೆ ಹಾಗೂ ಹೊರಗೆ ಪಾಠಹೇಳಿದ್ದರೂ ಮಹಾಮಹೋಪಾಧ್ಯಾಯ ವಿದ್ವಾನ್ ಜಿ ಮಹಾಬಲೇಶ್ವರ ಭಟ್ ಹಾಗೂ ಮಹಾಮಹೋಪಾಧ್ಯಾಯ ವಿದ್ವಾನ್ ಸೋ. ತಿ .ನಾಗರಾಜರು ಇವರಿಬ್ಬರ ವಿಚಾರದಲ್ಲಿ ವಿಶೇಷವಾದ ಪ್ರೀತಿ ಅಭಿಮಾನವಿತ್ತು. ಇವರೀರ್ವರ ಅಧ್ಯಯನ ಶ್ರಿಯುತರ ಮನಸ್ಸಿಗೆ ಬಹಳ ಸಮಾಧಾನವನ್ನು ತಂದೊಡ್ಡಿತ್ತು. ಆದ್ದರಿಂದಲೇ ಮಹಾಬಲೇಶ್ವರ ಭಟ್ಟ ಮತ್ತು ನಾಗರಾಜರು ನನ್ನೆರಡು ಕಣ್ಣುಗಳು ಎಂದು ಸದಾಕಾಲ ಹೇಳುತ್ತಿದ್ದರು. ತನ್ನ ಗುರುಗಳಿಂದ ಕಲಿತ ವ್ಯಾಕರಣಶಾಸ್ತ್ರವನ್ನು ಇವರಿಬ್ಬರೂ ಗುರೂಪದೇಶದಂತೆ ಶಿಷ್ಯರಿಗೆ ಬೋಧಿಸಿ ವ್ಯುತ್ಪನ್ನ ಶಾಸ್ತ್ರಜ್ಞರನ್ನು ಸಿದ್ಧಗೊಳಿಸಿ ಜಗಕೆ ನೀಡಿದ ಶಿಷ್ಯೋತ್ತಮರಾಗಿದ್ದರಿಂದ ಇವರೀರ್ವರ ಮೆಲೆ ವಿಶೇಷವಾದ ಅಭಿಮಾನ ಶರ್ಮರಿಗಿತ್ತು. ತನ್ನ ವಿದ್ಯಾವಂಶ ಬೆಳೆಯುತ್ತಿರುವುದನ್ನು ನೋಡಿ, ಬೆಳೆಸುತ್ತಿರುವ ಶಿಷ್ಯರನ್ನು ಎಲ್ಲೆಡೆ ಅಭಿನಂದಿಸುತ್ತಿದ್ದರು.
ಶ್ರೀಯುತ ಶರ್ಮರು ತಮ್ಮ ವೃತ್ತಿಜೀವನವನ್ನಾರಂಭಿಸುತ್ತಿದ್ದಂತೆಯೇ ಸಾಂಸಾರಿಕ ಬದುಕಿನತ್ತ ರತರಾದರು.೧೯೪೧ ರಲ್ಲಿ ಕು. ಕಮಲಾಕ್ಷಮ್ಮನವರೊಡನೆ ವಿವಾಹವಾದರು. ಮುಂದೆ ಸದಾನಂದ, ಶಾರದಾ, ಜಯಶ್ರೀ, ನಾಗಭೂಷಣರೆಂಬ ನಾಲ್ಕು ಮಕ್ಕಳನ್ನು ಪಡೆದರು. ತೃಪ್ತ ಸಂಸಾರವಾಗಿದ್ದರೂ ವಿಧಿನಿಯಮ ಬಲವಾಗಿತ್ತು. ೧೯೭೩ರಲ್ಲಿ ಅನಾರೋಗ್ಯದ ಕಾರಣದಿಂದ ಶ್ರೀಮತೀ ಕಮಲಾಕ್ಷಮ್ಮನವರು ಇಹಲೋಕ ತ್ಯಾಗ ಮಾಡಿದರು. ಶ್ರೀಯುತ ಶರ್ಮರ ಜೀವನದ ಅತ್ಯಂತ ಕಠಿಣ ಸಂದರ್ಭ ಇದಾಯಿತು. ನಾಲ್ಕು ಜನ ಮಕ್ಕಳ ಪಾಲಿನ ತಾಯಿ-ತಂದೆ ಇಬ್ಬರೂ ಶ್ರೀಯುತ ಶರ್ಮರಾದರು.
ವಿದ್ಯಾರ್ಥಿ ಜೀವನದಿಂದಲೇ ಶ್ರೀಯುತರಿಗೆ ಬರವಣಿಗೆಯೆಂದರೆ ಅತೀವ ಆಸಕ್ತಿ. ಕವಿತಾ ರಚನೆ, ಚರ್ಚಾಸ್ಪರ್ಧೆ, ಭಾಷಣ ಸ್ಪರ್ಧೆಗಳಲ್ಲಿ ಭಾಗವಹಿಸುವುದೆಂದರೆ ಶ್ರೀಯುತರಿಗೆ ಅಪರಿಮಿತೋತ್ಸಾಹ. ಬಾಲ್ಯದಿಂದಲೇ ಪುಸ್ತಕದ ಹುಳು ಎನಿಸಿಕೊಂಡಿದ್ದ ಶ್ರೀಯುತರು ವೃತ್ತಿಜೀವನದಲ್ಲಂತೂ ಪ್ರತಿಕ್ಷಣವನ್ನೂ ಅಧ್ಯಯನ ಅಥವಾ ಅಧ್ಯಾಪನಕ್ಕೆ ವಿನಿಯೋಗಿಸುತ್ತಿದ್ದರು. ಉಪನ್ಯಾಸ, ತಾಳಮದ್ದಲೆ - ನಾಟಕಗಳಲ್ಲಿ ಭಾಗವಹಿಸುವುದು ಇವರ ಹವ್ಯಾಸವಾಗಿತ್ತು. ಪಠ್ಯರಚನಾ ಸಮಿತಿಯಲ್ಲಿ ಇವರ ಸೇವೆ ಅಪಾರ. ಶ್ರೀಯುತ ಡಿ.ವಿ.ಜಿ.ಯವರ ಪ್ರೇರಣೆಯಿಂದ ಸಮಗ್ರ ಶ್ರೀಮದ್ವಾಲ್ಮೀಕಿರಾಮಾಯಣವನ್ನು ಕನ್ನಡಕ್ಕನುವಾದಿಸುವ ಭಾಗ್ಯ ಇವರಿಗೊದಗಿ ಬಂತು. ಇದು ಕನ್ನಡ ನಾಡಿದ ಜನತೆಯ ಮಹಾಸೌಭಾಗ್ಯವೇ ಆಯಿತು. ಕನ್ನಡದ ಜಾಯಮಾನಕ್ಕೆ ಹೊಂದುವ ಭಾಷೆಯಲ್ಲಿ ಅನುವಾದಿಸಿ ಕನ್ನಡಿಗರಿಗೆ ರಾಮರಸಾಯನ ಉಣಬಡಿಸಿದರು. ಇಷ್ಟಲ್ಲದೆ ಕನ್ನಡ ಸಾಹಿತ್ಯಪರಿಷತ್ತಿನ ಹಳೆಗನ್ನಡ ಗದ್ಯಾನುವಾದ ಸಮಿತಿಯ ಪ್ರಧಾನ ಸಂಪಾದಕರಾಗಿ ಸುಮಾರು ೧೩ ಗ್ರಂಥಗಳನ್ನು ಹೊಸಗನ್ನಡಕ್ಕೆ ಅನುವಾದಿಸಿದರು. ಅನೇಕ ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯುವ ಮೂಲಕ ನಿರಂತರವಾಗಿ ಸ್ವಚಿಂತನೆಗಳನ್ನು ಸಮಾಜಕ್ಕೆ ನೀಡುತ್ತಿದ್ದರು.ಸಂಸ್ಕೃತ ಲೇಖನಗಳು, ನಾಟಕಗಳು, ಸ್ತೋತ್ರಗಳು, ಕನ್ನಡಗ್ರಂಥಗಳು, ಅನುವಾದ ಗ್ರಂಥಗಳು ಹೀಗೆ ಸಂಸ್ಕೃತ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸುಮಾರು ೯೦ ಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿ ಅಪಾರವಾದ ಸೇವೆಯನ್ನು ಸಲ್ಲಿಸಿ ಜೀವನವನ್ನು ಸಾರ್ಥಕಗೊಳಿಸಿದರು. ದೇಶದಲ್ಲಿ ನಡೆಯುತ್ತಿದ್ದ ಪ್ರತಿಷ್ಠಿತ ವಿದ್ವದ್ಗೋಷ್ಠಿಗಳಲ್ಲಿ ಭಾಗವಹಿಸಿ ಸದಾ ಸರಸ್ವತೀ ಸೇವೆಯನ್ನು ಮಾಡುತ್ತಿದ್ದರು. ಯಾವುದೇ ಜಾತಿ ಮತ ಪಂಥಗಳ ಭೇದಗಳಿಲ್ಲದೆ ಎಲ್ಲಾ ಮಠಗಳಲ್ಲಿ ನಡೆಯುತ್ತಿದ್ದ ಗೋಷ್ಠಿಗಳಲ್ಲಿ ಭಾಗವಹಿಸುತ್ತಿದ್ದರು.
ಶ್ರೀಯುತ ಶರ್ಮರ ಗುಣ, ಪಾಂಡಿತ್ಯ, ಪ್ರತಿಭೆಯನ್ನು ಗುರುತಿಸಿ ಅನೇಕ ಮಠಗಳು, ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಇವರನ್ನು ಗೌರವಿಸುವ ಮೂಲಕ ತಮ್ಮ ಗೌರವವನ್ನು ಹೆಚ್ಚಿಸಿಕೊಂಡಿವೆ. ನಡಹಳ್ಳಿಯ ಗ್ರಾಮಸ್ಥರ ಪ್ರೀತಿಯ ಸಮ್ಮಾನ ಕಾರ್ಯಕ್ರಮದಿಂದಾರಂಭಿಸಿ ರಾಷ್ಟ್ರಪತಿ ಪುರಸ್ಕಾರದವರೆಗಿನ ಎಲ್ಲಾ ಪ್ರಶಸ್ತಿಗಳೂ ಇವರಿಗೆ ಸಂದಿವೆ.
ನಡಹಳ್ಳಿಯಲ್ಲಿ ಜನಿಸಿ ಬೆಂಗಳೂರಿನಲ್ಲಿ ಬೆಳೆದು ಮೈಸೂರಿನಲ್ಲಿ ತನ್ನ ಹಿರಿಯ ಮಗನಾದ ಸದಾನಂದರೊಂದಿಗೆ ಸದಾ ಆನಂದದಿಂದಿದ್ದ ಶ್ರೀಯುತ ಶರ್ಮರು ೨೫-೦೧-೨೦೧೪ ರಲ್ಲಿ ಸರಸ್ವತೀ ಯಾಮದಲ್ಲಿ ಪಂಚಭೂತಗಳಲ್ಲಿ ಲೀನವಾಗುವ ಮೂಲಕ ಭರತಖಂಡದ ಅತಿದೊಡ್ಡ ಜ್ಞಾನರಾಶಿಯೇ ಉಪರತವಾಯಿತು. ಇನ್ನಷ್ಟು ನೋಡಿ...
ಹೆಸರು : | ಎನ್.ರಂಗನಾಥಶರ್ಮಾ |
ತಂದೆಯ ಹೆಸರು : | ಶ್ರೀ ಎನ್.ತಿಮ್ಮಪ್ಪ |
ತಾಯಿಯ ಹೆಸರು : | ಶ್ರೀಮತೀ ಜಾನಕಮ್ಮ |
ಪತ್ನಿಯ ಹೆಸರು | ಶ್ರೀಮತೀ ಕಮಲಾಕ್ಷಮ್ಮ |
ಹಿರಿಯ ಪುತ್ರ | ಶ್ರೀ ಸದಾನಂದ |
ಕಿರಿಯ ಪುತ್ರ : | ಡಾ॥ ನಾಗಭೂಷಣ |
ಹಿರಿಯ ಪುತ್ರಿ : | ಡಾ॥ ಶಾರದಾ ಚೈತ್ರ |
ಕಿರಿಯ ಪುತ್ರಿ : | ಶ್ರೀಮತೀ ಜಯಶ್ರೀ |
ಜನ್ಮ ದಿನಾಂಕ : | ೭-೪-೧೯೧೬ : ನಲ ಸಂವತ್ಸರದ ವೈಶಾಖ ಶುದ್ಧ ಪಂಚಮೀ ಶಂಕರ ಜಯಂತಿಯ ಶುಭದಿನ |
ಜನ್ಮ ನಕ್ಷತ್ರ : | ಪುನರ್ವಸು |
ದೇಹತ್ಯಾಗ : | ೨೫-೦೧-೨೦೧೪ :ವಿಜಯ ಸಂವತ್ಸರದ ಪುಷ್ಯ ಬಹುಳ ನವಮೀ. |
ಹುಟ್ಟಿದ ಸ್ಥಳ : | ದಂಡವತೀ ನದೀ ತೀರದ ನಡಹಳ್ಳಿ, ಸೊರಬ ತಾಲ್ಲೂಕು, ಶಿವಮೊಗ್ಗ ಜಿಲ್ಲೆ , ಕರ್ನಾಟಕ, |
ರಾಷ್ಟ್ರಿಯತೆ : | ಭಾರತೀಯ |
ಧರ್ಮ : | ಹಿಂದೂ |
ಜಾತಿ : | ಬ್ರಾಹ್ಮಣ |
ಉಪಜಾತಿ : | ಹವ್ಯಕ |
ಗೋತ್ರ : | ವಿಶ್ವಾಮಿತ್ರ |
ಸೂತ್ರ : | ಬೋಧಾಯನ |
ವೇದ : | ಯಜುರ್ವೇದ |
ವಿದ್ಯಾಭ್ಯಾಸ : |
|
ವಿದ್ಯಾಗುರುಗಳು : |
|
ವೃತ್ತಿ : |
|
ಇಷ್ಟ ದೈವ : | ಶ್ರೀರಾಮಚಂದ್ರ |
ಇಷ್ಟಗುರು : | ಭಗವತ್ಪಾದ ಶಂಕರಾಚಾರ್ಯರು |
ಆಪ್ತ ಶಿಷ್ಯರು : | ಮಹಾಮಹೋಪಾಧ್ಯಾಯ ವಿದ್ವಾನ್ ಜಿ. ಮಹಾಬಲೇಶ್ವರ ಭಟ್ಟರು ಮತ್ತು ಮಹಾಮಹೋಪಾಧ್ಯಾಯ ವಿದ್ವಾನ್ ಸೋ.ತಿ.ನಾಗರಾಜರು |
ಹವ್ಯಾಸ : | ಗ್ರಂಥಾಧ್ಯಯನ, ಅಧ್ಯಾಪನ, ಲೇಖನ, ಪ್ರವಚನ, ವೃತ್ತಪತ್ರಿಕೆ ವಾಚನ, ನಿಯತವಾಗಿ ರೇಡಿಯೋ ವಾರ್ತೆ ಶ್ರವಣ |
ಸಾಮಾಜಿಕ ಸೇವೆ : |
|
सहृदयता, सद्गुणाः, पाण्डित्यमित्येतेषाम् अपूर्वः समवायः श्रीरङ्गनाथशर्माणः। भारतदेशस्य नैरृत्त्यदिग्भागे कर्णाटकेषु शिवमोग्गमण्डलस्य सोरब-उपमण्डलस्य नडहल्लिग्रामः रङ्गनाथशर्मणां जन्मस्थलम्। भगवत्पादशङ्कराचार्याणाम् अवतारतिथौ परमपवित्रायां वैशाखशुद्धपञ्चम्यां मर्यादापुरुषोत्तमस्य श्रीरामचन्द्रस्य जन्मनक्षत्रे पुनर्वसुनक्षत्रे श्रीमती जानकम्मा, श्रीमान् तिम्मप्पः – इत्येतयोः दम्पत्योः पुत्रत्वेन अवतीर्णाः श्रीरङ्गनाथशर्माणः (07.04.1916). विश्वमित्रगोत्रोद्भवाः, बोधायनसूत्राध्यायिनः, यजुर्वेदिनः, श्रीरङ्गनाथशर्माणः जगद्गुरुशङ्कराचार्यमहासंस्थानं, गोकर्णश्रीरामचन्द्रापुरमठस्य शिष्यपरम्परायां हव्यक – नामके स्मार्तब्राह्मणसमुदाये जन्म प्राप्तवन्तः।
कृषिकाणां परिवारे जाताः रङ्गनाथशर्माणः नडहल्लिग्रामे, सोरबपत्तने च प्राथमिकं विद्याभ्यासं प्राप्तवन्तः। अग्रे अगडि-आनन्दाश्रमे संस्कृताध्यननमारब्धम्, किन्तु अनारोग्यवशात् अल्पकालादेव ततः निर्गमनमभूत्। तदनन्तरं केलदि-रामेश्वरदेवालये संस्कृतपाठशालायां वर्षत्रयं यावत् वेदसंस्कृतबालपाठं मत्तूरु वेदब्रह्म श्री नारायणशास्त्रिणां सकाशे अधीतवन्तः। प्रथमकाव्यपरीक्षे उत्तीर्य साहित्याध्ययनार्थं बेङ्गलूरुनगरस्य श्रीचामराजेन्द्रसंस्कृतमहापाठशालां प्रविष्टाः। तत्र साहित्याध्ययनं कृत्वा, ततः प्रसिद्धानां विदुषां वेदब्रह्म श्री नुग्गेहल्लि तिरुनारायण अय्यङ्गार्याः, विद्वान् तिम्मण्णचार्याः, विद्वान् श्रीकण्ठशास्त्रिणः, विद्वान् कृष्णशास्त्रिणः इत्येतेषाम् आचार्याणां सकाशे व्याकरणशास्त्रस्य प्रौढग्रन्थान् अधीत्य व्यकरणविद्वन्मध्यमापरीक्षां, विद्वदुत्तमापरीक्षां च विशिष्टश्रेण्याम् उत्तीर्य “व्याकरणविद्वान्” इति पदवीं प्राप्तवन्तः।
ततः वेदब्रह्म श्रीलक्ष्मीनारायणशास्त्रिणां, पण्डितप्रवर कोडूरु कृष्णजोयिसमहाभागानां च सविधे अलङ्कारशास्त्रस्य प्रौढग्रन्थान् अधीत्य, परीक्षामुत्तीर्य “अलङ्कारविद्वान्” इत्येतां पदवीम् अर्जितवन्तः। एतयोरेव विदुषोः मार्गदर्शनेन अद्वैतवेदान्तशास्त्रमपि अधीत्य वेदान्तशास्त्रपारङ्गतानां श्रिविद्योपासकानां वेदब्रह्म श्री K.P. शङ्करशास्त्रिणां छात्रत्वे अद्वैतवेदान्तस्य प्रौढग्रन्थानां गभीरम् अध्यननं विधाय “वेदान्तविद्वान्” इति पदवीमपि लब्धवन्तः। सतताध्ययनशीलानाम् एतेषां ज्ञानपिपासा अनेनापि न शान्ता। ततः पुरातनकन्नड-मध्यमकन्नड-नूतनकन्नडानां शास्त्रीयमध्ययनं विधाय मद्रास् विश्वविद्यालयस्य कन्नडविद्वान् परीक्षायां विशिष्टश्रेण्याम् उत्तीर्णतां प्राप्य “कन्नडविद्वान्” पदवीभाजः अभूवन् श्रीरङ्गनाथशर्माणः। कर्णाटकसर्वकारस्य कन्नडपण्डितपरीक्षामपि उत्तीर्य कर्णाटकसर्वकारस्य “कन्नडपण्डित”बिरुदमपि प्राप्तवन्तः।
श्रीरङ्गनाथशर्माणः श्रीचामरजेन्द्रसंस्कृतपाठशालायाः विद्यार्थिसङ्घस्य कार्यदर्शिरूपेण वर्षचतुष्टयं यावत् कार्यं निरूढवन्तः। नैतावत्, स्ववासस्थाने व्यासमन्दिरविद्यार्थिनिलये छात्रव्यवस्थापकरूपेणापि कार्यं कृतवन्तः।
हासनमण्डलस्य प्रौढशालायां संस्कृताध्यापकत्वेन वृत्तिजीवनमारभ्य, श्रीरङ्गनाथशर्माणः ततः बेलूरु-संस्कृतपाठशालायां संस्कृताध्यापकाः अभूवन्। १९४८ तमे वर्षे बेङ्गलूरुनगरस्य श्रीचामराजेन्द्रसंस्कृतपाठशालायां व्याकरणशास्त्रविभागे अध्यापकत्वेन नियुक्ताः। प्रायः अष्टाविंशतिवर्षाणि यावत् तत्र अध्यापनं कृत्वा १९७६ तमे वर्षे निवृत्ताः। अध्यापकजीवने शतशः शिष्याः पाठशालायां बहिश्च तैः अध्यापिताः। तत्रापि महामहोपाध्यायः विद्वान् जी महाबलेश्वरभट्टाः, महामहोपाध्यायः विद्वान् सो. ति. नागराजाश्च रङ्गनाथशर्मणां प्रीतिपात्रौ शिष्यौ। अनयोः विषये रङ्गनाथशर्मणां महत् वात्सल्यमासीत्। अनयोः अध्ययनेन श्रमेण च रङ्गनाथशर्माणः नितान्तं तृप्ताः। अत एव महाबलेश्वरभट्टाः, नगराजाश्च मम नेत्रद्वयमिति तैः सर्वदा उच्यमानमासीत्। गुरुभिः अधीतं व्याकरणशास्त्रं गुरूणामादेशम् अनुसृत्य शिष्येभ्यः बोधयित्वा व्युत्पन्नानां शास्त्रज्ञानां निर्माणं कृतवन्तौ इति कारणेन अनयोः विषये रङ्गनाथशर्मणां महदभिमानमासीत्। विद्यावंशस्य अभिवृद्धिं वीक्ष्य तत्र कारणीभूतौ एतौ शिष्योत्तमौ तैः सर्वत्र अभिनन्दितौ।
वृत्तिजीवनप्रवेशनसमनन्तरमेव श्रीरङ्गनाथशर्माणः वैवाहिकजीवनमपि आरब्धवन्तः। १९४१ तमे वर्षे कुमार्या कमलाक्षम्मया सह एतेषां विवाहः संपन्नः। अग्रे सदानन्दः, शारदा, जयश्रीः, नागभूषणः इति चत्वारः पुत्राः जाताः। विधिवशात् १९७३ तमे वर्षे अनारोग्यग्रस्ता श्रीमती कमलक्षम्मा दिवङ्गता। श्रीरङ्गनाथशर्मणां जीवने अयं कालः अत्यन्तं दुःखगर्भितः आसीत्। ततः परं चत्वार्यपि अपत्यानि श्रीरङ्गनाथशर्माणः मातापित्रोः उभयोरपि रूपं धृत्वा पलितवन्तः।
छात्रस्तरादारभ्यापि श्रीरङ्गनाथशर्मणां लेखने महती आसक्तिः आसीत्। पद्यरचना, चर्चास्पर्धा, भाषणस्पर्धा इत्यादिषु शर्माणः सोत्साहं भागम् ऊढवन्तः। बाल्यादपि पुस्तकप्रीतिः आसीत्, वृत्तिजीवने तु एकैकं क्षणमपि अध्यनेन अध्यापनेन वा यापितवन्तः शर्माणः। उपन्यासः, नाटकादिषु भागवहनञ्च तेषां प्रवृत्तिः आसीत्। पठ्यरचनासमितिषु शर्मणां योगदानम् अमूल्यमासीत्। श्रीयुतानां डि.वि.जि वर्याणां प्रेरणया समग्रस्य श्रीमद्वाल्मीकिरामायणस्य कन्नडानुवादावकाशः शर्मभिः प्राप्तः। इदं कन्नडजनानां महत्सौभाग्यमेव। कन्नडभाषामर्यादां, सौन्दर्यं च मनसि निधाय शर्माणः अत्युत्कृष्टभाषया रामायणमनूद्य कन्नडजनानां रामरसायनास्वादने उपकृतवन्तः। अपि च कन्नडसाहित्यपरिषदः पुरातनकन्नडगद्यानुवादसमितेः प्रधानसंपादकाः भूत्वा, प्रायः त्रयोदश ग्रन्थान् आधुनिककन्नडभाषया अनूदितवन्तः। नैकासु दिनपत्रिकासु, साप्ताहिकपत्रिकासु, मासपत्रिकासु च लेखनानि विलिख्य निरन्तरं स्वचिन्तनानि समाजे प्रसारितवन्तः। संस्कृतलेखनानि, नाटकानि, स्तोत्राणि, कन्नडग्रन्थाः, अनुवादग्रन्थाः इत्येवं संस्कृतकन्नडसाहित्यक्षेत्रे नवतेः अधिकान् ग्रन्थान् विरचय्य महतीं सारस्वतसेवां विधाय स्वजीवनसार्थक्यं प्राप्तवन्तः। सर्वत्र विख्यातासु विद्वद्गोष्ठीषु भागमूढ्वा सर्वदा सरस्वतीसेवायां निरताः आसन्। जातिमतादीनां भेदं विना सर्वेषु मठेषु प्रचलितासु गोष्ठीषु भागमूढवन्तः।
श्रीरङ्गनाथशर्मणां सद्गुणान्, पाण्डित्यं, प्रतिभां च अभिज्ञाय नैके मठाः, संस्थाः, विश्वविद्यालयाश्च एतेषां सम्माननेन स्वगौरवमवर्धयन्। नडहल्लिग्रामजनानां प्रीतिपूर्वकसम्मानादारभ्य राष्ट्रपतिपुरस्करपर्यन्तं बहुविधाः प्रशस्तयः शर्मभिः प्राप्ताः।
नडहल्लिग्रामे जन्म प्राप्य, बेङ्गलूरुनगरे वासं कृत्वा, मैसूरुनगरे ज्येष्ठपुत्रेण सदानन्देन सह सानन्दं कालं यापितवन्तः श्रीरङ्गनाथशर्माणः २५/०१/२०१४ अस्मिन् दिने सरस्वतीयामे पञ्चभूतेषु लीनाः। तद्दिने भरतखण्डस्य महान् ज्ञानराशिरेव उपरतः।अग्रे पठन्तु...
नाम | न. रङ्गनाथशर्मा |
पितुः नाम | श्रीमान् . न. तिम्मप्पा |
मातुः नाम | श्रीमती जानकम्मा |
पत्न्याः नाम | श्रीमती कमलाक्षम्मा |
प्रथमः पुत्रः | श्रीमान् सदानन्दः |
कनीयान् पुत्रः | डा. नागभूषणः |
ज्यायसी पुत्री | डा. शारदा चैत्रा |
कनीयसी पुत्री | श्रीमती जयश्रीः |
जन्मदिनाङ्कः | ०७/०४/१९१६, नलसंवत्सरः, वैशाखशुद्धपञ्चमी, श्रीशङ्करजयन्तीशुभदिनम् |
जन्मनक्षत्रम् | पुनर्वसुः |
देहत्यागः | २५/०१/२०१४, विजयसंवत्सरः, पुष्यकृष्णनवमी |
जन्मस्थानम् | दण्डवतीनदीतीरे नडहल्लिग्रामः, सोरब्-उपमण्डलम्, शिवमोग्ग-मण्डलम्, कर्णाटकम् |
राष्ट्रियता | भारतीयः |
धर्मः | हिन्दूधर्मः |
जातिः | ब्राह्मणः |
उपजातिः | हव्यकः |
गोत्रम् | विश्वामित्रः |
सूत्रम् | बोधायनम् |
वेदः | यजुर्वेदः |
विद्याभ्यासः |
|
विद्यागुरवः |
|
वृत्तिः |
|
इष्टदेवता | श्रीरामचन्द्रः |
इष्टगुरुः | भगवत्पादशङ्कराचार्याः |
आप्तशिष्याः |
|
प्रवृत्तिः | ग्रन्थाध्ययनम्, अध्यापनम्, लेखनम्, प्रवचनम्, वृत्तपत्रिकावाचनम्, नियतम् आकाशवाणी वार्ताश्रवणम् |
समाजसेवा |
|
Bharata is famed as the land of punya (merit), tapas (penance) and karma (action). Innumerable intellectuals, scientists, ascetics, devout seers and scholars have taken birth here, and led fruitful lives dedicated to the welfare of the world. Venerable scholar Vid. N Ranganatha Sharma was born in this great lineage. He was a confluence of scholarship, virtues and a kind heart. He was born in the village of Nadahalli, located in the Soraba Taluk of Shimoga district, in the state of Karnataka. Sri. Sharma was born to Smt. Jaanakamma and Sri. Timmappa on 7th April 1916. That was Vaishaakha Shuddha Panchami – the auspicious day when Bhagavatpaada Shankaraachaarya incarnated on Earth. The star was Punarvasu, the birth-star of Srirama. Sri Sharma was a Yajurvedin of Vishvaamitra Gotra and Bodhaayana Sutra. He belonged to the Havyaka community of Smaarta Brahmins hailing from the lineage of disciples of Jagadguru Shankaracharya Mahasamsthanam – Srisamsthana Gokarna – Sri Ramachandrapura Matha.
Born into a family of farmers, Sri Sharma had his primary education in Nadahalli and Soraba. Then, he started his Sanskrit studies in the Agadi Anandashrama, but had to discontinue within a short time because of ill health. After that, for about three years, he studied Veda and basic Samskrita from Matturu Vedabrahma Sri Narayana Shastri, at the pathashala in the Rameshvara temple of Keladi. He passed the Prathamaa and Kaavya exams, and joined Sri Chamarajendra Samskrita Mahapathashala, Bangalore, for studying Sahitya. After completing Sahitya, he studied the advanced texts of Vyakarana under famed scholars like Vedabrahma Sri. Nuggehalli Tirunarayana Ayyangar, Vid. Timmanacharya, Vid. Srikantha Shastri and Vid. Krishna Shastri. He passed the Vidvan-madhyamaa and Vidvad-uttamaa examinations in distinction, and was awarded the degree of Vyaakarana Vidvan.
Further, he studied the texts of Alankaara Shastra under Vedabrahma Sri. Lakshminarayana Shastri and Panditapravara Koduru Krishna Jois, and passed the examination for Vidvat in Alankara Shastra. He also studied Vedanta under the same two scholars, and also learnt the advanced texts of Vedanta in depth from the great scholar and Srividya upaasaka, Vedabrahma Sri. K.P. Shankara Shastri, to become a Vedanta Vidvan. Sri Sharma was devoted to studies, and he also learnt the various modifications of the Kannada language traditionally (Halagannada, Nadugannada and Hosagannada), and passed the Kannada Vidvan examination conducted by the Madras University with distinction. He also passed the examination conducted by the Karnataka Government, to gain the title of Kannada Pandita.
Sri Sharma was the secretary of Students’ union of Sri Chamarajendra Sanskrit College for four years. He also served as the organizer of students in the Vyasamandira Student Hostel where he lived.
Sri. Sharma started his professional career as a teacher in a highschool in Hassan. He then joined the Samskrita Pathashala at Belur as a Sanskrit teacher. In 1948, he was appointed as a lecturer in the Department of Vyakarana at Sri. Chamarajendra Samskrita College in Bangalore. Having taught there for nearly 28 years, he retired in 1976. Through his career, he taught hundreds of students both within and outside the college. He was especially fond of two of his best students – Mahamahopadhyaya Vid. G Mahabaleshwar Bhat and Mahamahopadhyaya Vid. So Ti Nagaraja. He was proud of the mastery they had gained in Vyakarana through hard work. He always said that Mahabaleshwar Bhat and So Ti Nagaraja were like his two eyes. He was extremely happy that these two, having learnt the shastra from him, were in turn passing it on to deserving students, and nurturing the next generation of scholars. Delighted at seeing the family of his student-lineage growing, he enthused them with his appreciation and encouragement.
Sri. Sharma entered into the life of a householder soon after starting his career. He married Kamalakshamma in 1941. The couple had four children – Sadananda, Sharada, Jayashri and Nagabhushana. They led a contented life, but by a twist of fate, Smt. Kamalakshamma passed away in 1973 due to an illness. This was a very difficult period in his life. Sri. Sharma was thereafter both a father and a mother to his four children.
Sri. Sharma was deeply interested in writing, right from his student life. He used to participate enthusiastically in Poetry, Debate and Elocution competition. Being labelled a ‘bookform’ since childhood, Sri. Sharma utilized every moment of his professional life for learning and teaching. Participating in discourses and dramas was his hobby. His contribution to textbook committee is invaluable.
Sri. Sharma had the opportunity of translating the entire Srimad Valmiki Ramayana to Kannada, under the encouragement of Sri. DVG. This was a stroke of fortune for the people of Karnataka. Sri. Sharma served a feast of Ramakathaa to Kannadigas, translating the text in a style eminently suited to the Kannada language. Sri. Sharma was also the president of the Old Kannada Prose Translation committee of the Kannada Sahitya Parishat, and translated about 13 ancient Kannada texts to modern Kannada.
Sri. Sharma was constantly communicating his thoughts to the public through regular writings for various daily, weekly and monthly magazines. Leading an extremely fruitful life, he has contributed more than 90 texts to Sanskrit and Kannada literature, including articles, dramas, stotras, translations and much more. He took part in various scholarly meetings across the country, and was constantly engaged in the service of Goddess Sarasvati. He used to take part in assemblies of all mathas, without any distinction of caste or creed.
Sri. Ranganatha Sharma was an outstanding scholar. Hundreds of awards came to him in honour of his achievements. From an affectionate felicitation by the simple villagers of Nadahalli, to the President’s award, he has been the recipient of all kinds of honours. Several mathas, universities, public organisations and the Government have honoured themselves by conferring awards on him.
Sri. Sharma was born in Nadahalli, spent his student and professional life in Bangalore, and later, lived happily with his son Sadananda in Mysore. When he passed away on 25-01-2014, India lost a great pillar of knowledge. more...
Name : | N. Ranganatha Sharma |
Father : | Sri. N Timmappa |
Mother : | Smt. Jaanakamma |
Wife : | Smt. Kamalakshamma |
Elder Son | Sri. Sadananda |
Younger Son | Dr. Nagabhushana |
Elder daughter | Dr. Sharada Chaitra |
Younger daughter | Smt. Jayashri |
Birth date | 07-04-1916. Nala Samvatsara, Vaishakha Shuddha Panchami, Auspicous day of Shankara Jayanthi. |
Birth Start | Punarvasu |
Death | 25-01-2014. Vijaya Samvatsara, Pushya Bahula Navami |
Birthplace | Nadahalli village on the banks of Dandavati river, Soraba Taluk, Shivamogga District, Karnataka |
Nationality | Indian |
Religion | Hindu |
Caste | Brahmin |
Subcaste | Havyaka |
Gotra | Vishvamitra |
Sutra | Bodhaayana |
Veda | Yajurveda |
Education |
|
Gurus |
|
Career |
|
© ೨೦೧೯ - ಮಹಾಮಹೋಪಾಧ್ಯಾಯ ವಿದ್ವಾನ್ ಎನ್. ರಂಗನಾಥಶರ್ಮಾ ಅಂತರ್ಜಾಲತಾಣ ನಿರ್ಮಾಣ ಸಮಿತಿ, ಬೆಂಗಳೂರು