ಪುಣ್ಯಭೂಮಿ – ತಪೋಭೂಮಿ – ಕರ್ಮಭೂಮಿಯೆನಿಸಿದ ಭರತಭೂಮಿಯಲ್ಲಿ ಅದೆಷ್ಟೋ ಜ್ಞಾನಿಗಳು, ವಿಜ್ಞಾನಿಗಳು, ಅವಧೂತರು, ತಪಸ್ವಿಗಳು, ಸಾಧಕರು, ವಿದ್ವಾಂಸರು, ಪುಣ್ಯಾತ್ಮರು ಅವತರಿಸಿ ಜಗಕುಪಕರಿಸಿ ಬದುಕನ್ನು ಸಾರ್ಥಕವನ್ನಾಗಿಸಿದ್ದಾರೆ. ಇಂತಹ ಪರಂಪರೆಯಲ್ಲಿ ಅವತರಿಸಿದ ಸಾಧಕೋತ್ತಮ ವಿದ್ವಾಂಸರು ವಿದ್ವಾನ್ ಎನ್. ರಂಗನಾಥಶರ್ಮರು. ಸಹೃದಯತೆ-ಸದ್ಗುಣ-ಪಾಂಡಿತ್ಯಗಳ ಸಂಗಮಕ್ಕೊಂದು ಉತ್ತಮ ಉದಾಹರಣೆಯೆಂದರೆ ಶ್ರೀಯುತ ಶರ್ಮರು. ಭಾರತದೇಶದ ನೈಋತ್ಯ ಭಾಗದಲ್ಲಿ ದೇಶದ ಯಜಮಾನನೋ ಎಂಬಂತೆ ರಾರಾಜಿಸುತ್ತಿರುವ ರಾಜ್ಯವಾದ ಕರ್ನಾಟಕದಲ್ಲಿ ಮಲೆನಾಡಿನಿಂದಲೇ ಪ್ರಸಿದ್ಧಿಯನ್ನು ಹೊಂದಿದ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ನಡಹಳ್ಳಿಯು ಇವರ ಜನ್ಮಸ್ಥಳ. ಭಗವತ್ಪಾದಶಂಕರಾಚಾರ್ಯರು ಜಗಕವತರಿಸಿದ ಪರಮಪವಿತ್ರದಿನವಾದ ವೈಶಾಖಶುದ್ಧ ಪಂಚಮಿಯಂದು ಹಾಗೂ ಮರ್ಯಾದಾ ಪುರುಷೋತ್ತಮನಾದ ಶ್ರೀರಾಮಚಂದ್ರನು ಆವಿರ್ಭವಿಸಿದ ಪುಣ್ಯನಕ್ಷತ್ರವಾದ ಪುನರ್ವಸು ನಕ್ಷತ್ರದಲ್ಲಿ ಶ್ರೀಮತಿ ಜಾನಕಮ್ಮ ತಿಮ್ಮಪ್ಪ ದಂಪತಿಗಳ ಸುಪುತ್ರರಾಗಿ ೦೭-೦೪-೧೯೧೬ ರಂದು ಜನಿಸಿದರು. ವಿಶ್ವಾಮಿತ್ರ ಗೋತ್ರದ ಬೋಧಾಯನ ಸೂತ್ರದ ಯಜುರ್ವೇದಿಗಳಾದ ಶ್ರೀಯುತರು ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನಮ್ – ಶ್ರೀಸಂಸ್ಥಾನ ಗೋಕರ್ಣ – ಶ್ರೀರಾಮಚಂದ್ರಾಪುರ ಮಠದ ಪಾರಂಪರಿಕ ಶಿಷ್ಯಪರಂಪರೆಗೆ ಸೇರಿದ ಸ್ಮಾರ್ತ ಬ್ರಾಹ್ಮಣ ಪಂಗಡಗಳಲ್ಲೊಂದಾದ ಹವ್ಯಕ ಪಂಗಡಕ್ಕೆ ಸೇರಿದವರು.
ಮುಂದೆ ಓದಿ...